
5th September 2025
ಕುಷ್ಟಗಿ ತಾಲೂಕಿನ ಹಿರೇಮನ್ನಾಪೂರ ಗ್ರಾಮದಲ್ಲಿ ಲಿಂಗೈಕ್ಯ ಪರಮಪೂಜ್ಯ ಶ್ರೀ ಶಂಕರಲಿಂಗ ಗುರುವರ್ಯರ 41 ನೇ ಪುಣ್ಯತಿಥಿ, ಜಾತ್ರಾ ಮಹೋತ್ಸವದ ಅಂಗವಾಗಿ ದಿನಾಂಕ 3-9-2025 ರಿಂದ 13-9-2025 ರ ವರೆಗೆ ಧಾರ್ಮಿಕ ಕಾರ್ಯಕ್ರಮಗಳು ಅನವರತ 11 ದಿನಗಳವರೆಗೆ ನಡೆಯುತ್ತಿದೆ.
ಗುರುವಾರ ದಿನಾಂಕ: 4-9-2025 ರಂದು ನಡೆದ ಎರಡನೇ ದಿನದ ಪುರಾಣದಲ್ಲಿ ಪರಮ ಪೂಜ್ಯ ಶ್ರೀ ಕೇಶವಾನಂದ ಶ್ರೀಗಳು ಶಿದ್ದರೂಡ ಬಸವ ಆಶ್ರಮ ಹಾಗೂ ಶ್ರೀ ಶಿವಾಚಾರ್ಯ ಶ್ರೀಗಳು ಗಿನಿವಾರ ಇವರು
ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.
ಇದೇ ವೇಳೆ ಪೂಜ್ಯರಿಗೆ ಗೌರವಿಸಿ ಸನ್ಮಾನಿಸಲಾಯಿತು.
ನಂತರ ನವ ದುರ್ಗೆಯರ ಪಾದ ಪೂಜೆಯು ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಗುರು ಶಂಕರಲಿಂಗ ಮಠ ಹಿರೇಮನ್ನಾಪೂರದ ಗೌರವಾಧ್ಯಕ್ಷರಾದ ಹಾಗೂ ಧರ್ಮಾಧಿಕಾರಿಗಳಾದ ಬಾಲಚಂದ್ರಪ್ಪನವರು ಹಾಗೂ ಪರಮ ಪೂಜ್ಯ ಶ್ರೀ ಕೇಶವಾನಂದ ಶ್ರೀಗಳು ಶಿದ್ದರೂಡ ಬಸವ ಆಶ್ರಮ, ಶ್ರೀ ಶಿವಾಚಾರ್ಯ ಶ್ರೀಗಳು ಗಿನಿವಾರ, ನಾಗರಾಜ್ ಜಿಗಜಿನ್ನಿ, ಶರಣಪ್ಪ ಮ್ಯಾಗೇರಿ,
ಶಿವಾನಂದ ಗುರುಗಳು ಸೇರಿದಂತೆ ಇತರರಿದ್ದರು.
ಭೀಮಸೇನರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ.
ಹಿರೇಮನ್ನಾಪೂರ ಗ್ರಾಮದಲ್ಲಿ ಗುರುವಾರ ಎರಡನೇ ದಿನದ ಪುರಾಣ ಕಾರ್ಯಕ್ರಮ ಉದ್ಘಾಟನೆಯು ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನೀಡಲಾಯಿತು. ನಂತರ ನವ ದುರ್ಗೆಯರ ಪಾದ ಪೂಜೆಯು ಶೃದ್ದಾ ಭಕ್ತಿಯಿಂದ ನಡೆಯಿತು.
ಶ್ರೀ ಗುರು ಶಂಕರಲಿಂಗ ಶಿವಯೋಗಿಗಳ ಜಾತ್ರೆಯ ನಿಮಿತ್ಯ 3ನೇ ದಿನದಂದು ಬೆಟ್ಟದಲ್ಲಿ ಸತತ 24 ತಾಸು ಭಜನೆ
ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಕುರಿತು ಕುಷ್ಟಗಿ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮ
ಶ್ರೀ ಶಂಕರಲಿಂಗ ಗುರುವರ್ಯರ 41 ನೇ ಪುಣ್ಯತಿಥಿ ಅಂಗವಾಗಿ ಮೊದಲನೇ ದಿನ ಪುರಾಣದ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಶ್ರೀಗಳವರಿಂದ ಚಾಲನೆ.
ಪರಮಪೂಜ್ಯ ಶ್ರೀ ಶಂಕರಲಿಂಗ ಗುರುವರ್ಯರ 41 ನೇ ಪುಣ್ಯತಿಥಿ, ಜಾತ್ರಾ ಮಹೋತ್ಸವ.
ಶ್ರೀ ಸಂಜೀವ ಜೋಶಿ ಅವರಿಂದ ಚಿಪ್ಪಗಿರಿಯ ತಪೋನಿಧಿ ಶ್ರೀ ವಿಜಯದಾಸರ ಸೇವಾ ಬಳಗದಲ್ಲಿ ಇಂದು 250ನೇ ನೇರ ಪ್ರಸಾರದ ಸಂಗೀತ ಕಾರ್ಯಕ್ರಮ